Sunday, January 11, 2009


ಪ್ರಿಯ ಕಲಾವಿದರೆ,

ಹೊಸ ತಂತ್ರಜ್ಞಾನದ ಆರ್ಭಟದ ಮಧ್ಯೆ ನಮ್ಮ ಭಾಷೆ, 'ನಮ್ಮತನ' ತೆರೆಮರೆಗೆ ಸರಿಯುತ್ತಿದೆಯೇ?
ಬರುವ ದಿನಗಳಲ್ಲಿ ನಮ್ಮದೆಂಬ ಭಾಷೆಯ ಸೌಗಂಧ ಮಸುಕಾಗುವುದೇ? ಹಾಗಂತ ನಿಮಗೆ ಅನ್ನಿಸ್ತಿದೆಯಾ?
ಈ ಬಗೆಯ ತಳಮಳಗಳಿಗೆ ಉತ್ತರ ವಾಗಿ, http://www.kannadasaahithya.com/ ಸಹಯೋಗದೊಂದಿಗೆ, http://www.samvaada.com/ ಒಂದು ಕಲಾ ಪ್ರದರ್ಶನವನ್ನು ಆಯೋಜಿಸುತ್ತಿದೆ.

'ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆ'

ಇದು, ದೇಶೀಯ ಭಾಷೆಗಳನ್ನ ಬಳಸಿ ಇಂದಿನ ಐಟಿ ತಂತ್ರಜ್ಞಾನವನ್ನ ಬಲಪಡಿಸುವ ಸಾಧ್ಯತೆಗಳ ನಿಟ್ಟಿನಲ್ಲಿ ಒಂದು ಪ್ರಯತ್ನ. ಐಟಿ ಕ್ಷೇತ್ರದಲ್ಲಿ ಸರ್ವವ್ಯಾಪಿಯಾಗಿ ಇಂಗ್ಲೀಷ್ ಒಂದೇ ಆವರಿಸಿರುವ ಈಗಿನ ಕಾಲಘಟ್ಟದಲ್ಲಿ, ದೇಶೀಯ ಭಾಷೆಗಳೆಡೆ ಈ ಅಸಡ್ಡೆ ಹೀಗೇ ಮುಂದುವರಿದಲ್ಲಿ, ಅವು 'ಮೃತ' ಭಾಷೆಗಳ ಸಾಲಿಗೆ ಸೇರುವ ಆತಂಕ ಇಲ್ಲದಿಲ್ಲ. ಈ ಅವಗಣನೆಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ನೆಡೆಯುತ್ತಿರುವ ಪ್ರಯತ್ನಗಳಿಗೆ, ನಿಮ್ಮ ಕಲಾಭಿವ್ಯಕ್ತಿಯ ಮಾಧ್ಯಮದ (ಚಿತ್ರಕಲೆ, ವ್ಯಂಗ್ಯ ಚಿತ್ರಕಲೆ) ಮೂಲಕ ಬೆಂಬಲಿಸುವ ಅವಕಾಶ ನಿಮಗೆ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ.

ಬೆಂಗಳೂರಿನಲ್ಲಿ ನಡೆಯಲಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ಇದ್ದಲ್ಲಿ, ನಿಮ್ಮ ಸ್ವ-ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ.
ನಿಮ್ಮ ಭಾವಚಿತ್ರ ಹಾಗೂ ಇತರ ವಿವರಗಳನ್ನು ಕಳುಹಿಸಲು ಈ-ಮೇಲ್ ವಿಳಾಸ info@samvaada.com
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :ಪ್ರಮೋದ್. ಪಿ.ಟಿ. +91 9448701470(ಸಂವಾದ.ಕಾಂ ನ ಪರವಾಗಿ)

No comments:

Post a Comment